ಕಳೆದ ಮೂರು ದಶಕಗಳಲ್ಲಿ ಗ್ರಾಮಭಾರತವು ಹಲವಾರು ಬಗೆಯ ಲೂಟಿಗೊಳಗಾಗಿದೆ. ಗ್ರಾಮಭಾರತದ ರೈತರನ್ನು ಘನತೆಯ ಅರ್ಹ ನಾಗರಿಕರೆಂದು ಪರಿಗಣಿಸುವ ಬದಲು ಕೈಯೊಡ್ಡುವ ದೈನ್ಯಾವಸ್ಥೆಗೆ ಇಳಿಸಲಾಗಿದೆ. ಗ್ರಾಮಭಾರತದ ಭೂಮಿ ಬೋಳಾಗಿ ಬರಡಾಗಿದೆ. ಕೃಷಿಯನ್ನು ಜೀವಧಾರಕ ಜೀವನೋಪಾಯವೆಂದು ಬಗೆಯದೇ, ಸೂರೆಮಾಡುವ ಕೈಗಾರಿಕೆಯೆಂಬಂತೆ ಪ್ರೋತ್ಸಾಹಿಸಲಾಗುತ್ತಿದೆ. ಅದರ ಪ್ರಾಕೃತಿಕ ಸಂಪನ್ಮೂಲಗಳನ್ನು ಊಹಾತ್ಮಕ ಸೂರೆಯ ತಾಣಗಳನ್ನಾಗಿಸಲಾಗಿದೆ. ಹವಾಮಾನ ಬದಲಾವಣೆ ತಂದಿರುವ ಬಿಕ್ಕಟ್ಟುಗಳನ್ನು ಎದುರಿಸಲು ಯಾವ ಯೋಜನೆಯೂ ಇಲ್ಲ ರೈತರು ಮತ್ತು ಗ್ರಾಮೀಣ ನಾಗರಿಕರು ೨೧ನೇ ಶತಮಾನದ ನವ ಗುಲಾಮರ ಮಟ್ಟಕ್ಕೆ ಇಳಿಯಬಾರದೆಂಬ ಅಪೇಕ್ಷೆ ನಮಗಿದ್ದರೆ, ಗ್ರಾಮಭಾರತ ಮತ್ತು ಕೃಷಿಯ
ಅಸಂಖ್ಯ ಸಮಸ್ಯೆಗಳನ್ನು ಪರಿಹರಿಸಲು ಪರ್ಯಾಯ ದಾರಿಗಳ ಅಗತ್ಯವನ್ನು ಗುರುತಿಸಬೇಕಿದೆ. ಸಾಮಾಜಿಕ ಸಮತೆ, ಆರ್ಥಿಕ ಸ್ಥಿರತೆ, ಪರಿಸರಾತ್ಮಕ ಸುಸ್ಥಿರತೆ ಹಾಗೂ ರಾಜಕೀಯ ಪ್ರಜಾಸತ್ತೆಯನ್ನು ನನಸಾಗಿಸಲು ಹೊಸ ಚಿಂತನೆ, ವಿಧಾನ, ಸಂಸ್ಥೆಗಳು, ಪ್ರಕ್ರಿಯೆಗಳು ಮತ್ತು ರಚನೆಗಳ ಅಗತ್ಯವಿದೆ. ಗ್ರಾಮೀಣಭಾರತ-ಕರ್ನಾಟಕವೂ ಸೇರಿ- ಸಾಮಾಜಿಕ, ಪಾರಿಸಾರಿಕ ಮತ್ತು ಆರ್ಥಿಕ ತುರ್ತು
ಪರಿಸ್ಥಿತಿಯಲ್ಲಿದೆ. ಎಲ್ಲಾ ನಾಗರಿಕರೂ ಈ ಸಮಸ್ಯೆಗಳ ಅಂತರ್ಸಬAಧವನ್ನು ಅರ್ಥ ಮಾಡಿಕೊಂಡು ಇವುಗಳ ಪರಿಹಾರದತ್ತ ಪ್ರಯತ್ನ ನಡೆಸಬೇಕು. ಗ್ರಾಮ ಭಾರತದ ನೈಜ ಸಾಮರ್ಥ್ಯವನ್ನು ಕೆಟ್ಟ ಪರಿಕಲ್ಪನೆ, ಅಪ್ರಜಾಸತ್ತಾತ್ಮಕ ಯೋಜನೆ ಮತ್ತು ಕಡಿಮೆ ಪ್ರಾತಿನಿಧ್ಯದª ಮೂಲಕ ದಮನಿಸಿ, ವಿಕೃತಗೊಳಿಸಿ ನಾಶಗೊಳಿಸಲಾಗಿದೆ.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

NRAS-Final-Report-Kannada